ಹಾಸ್ಯ ಚಕ್ರವರ್ತಿ ನರಸಿಂಹರಾಜುರವರ ೮೯ನೇ ಜನ್ಮದಿನೋತ್ಸವ ಮತ್ತು ಗೋಲ್ಸ್ & ಡ್ರೀಮ್ಜ್ ನಿರ್ಮಾಣದ ಎವರೆಡಿ ಬಾಯ್ಜ್ ಚಿತ್ರದ ಮುಹೂರ್ತ
Posted date: 17 Tue, Jul 2012 ? 04:45:09 PM

ಪ್ರಥಮ ಬಾರಿಗೆ ಹಾಸ್ಯ ಚಕ್ರವರ್ತಿ ದಿ. ನರಸಿಂಹರಾಜುರವರ ಜನ್ಮದಿನೋತ್ಸವವನ್ನು ಅವರ ಮೊಮ್ಮಕ್ಕಳ ಸಂಸ್ಥೆಯಾದ ಗೋಲ್ಸ್ & ಡ್ರೀಮ್ಜ್ ಆಚರಿಸುತ್ತಿದೆ. ಈ ಸಂಬಂಧವಾಗಿ ರಾಜ್ಯಮಟ್ಟದ ಪ್ರಬಂಧ ಸ್ವರ್ಧೆಯನ್ನು ಸಂಸ್ಥೆ ಏರ್ಪಡಿಸಿ ಎರಡು ವಿಷಯಗಳನ್ನು ನೀಡಿತ್ತು. ವಿಷಯ ೧ : ಹಾಸ್ಯಾಭಿನಯಕ್ಕೆ ನರಸಿಂಹರಾಜುರವರ ಕೊಡುಗೆ ಮತ್ತು ವಿಷಯ ೨ : ಕನ್ನಡ ಚಿತ್ರರಂಗದಲ್ಲಿ ನರಸಿಂಹರಾಜುರವರು ಬೆಳೆದು ಬಂದ ಪರಿ. ಕರ್ನಾಟಕದ ಮೂಲೆ, ಮೂಲೆಗಳಿಂದ ಅಭಿಮಾನಿಗಳು ಪ್ರಬಂಧ ಬರೆದು ಕಳುಹಿಸಿದ್ದಾರೆ. ದೂರದ ಚೀನಾದಲ್ಲಿರುವ ಹಾಂಗ್‌ಕಾಂಗ್ ಮತ್ತು ದುಬಾಯ್‌ನಿಂದ ಕೂಡ ನರಸಿಂಹರಾಜುರವರ ಅಭಿಮಾನಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ವಿಶೇಷ.

ಜುಲೈ ೨೪, ೨೦೧೨ರಂದು ದಿ. ನರಸಿಂಹರಾಜುರವರ ೮೯ನೇ ಜನ್ಮದಿನದಂದು ಬೆಂಗಳೂರು ನಗರದ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‌ನಲ್ಲಿ ಇಡೀ ದಿನದ ಕಾರ್ಯಕ್ರಮವನ್ನು ಗೋಲ್ಸ್ & ಡ್ರೀಮ್ಜ್ ಸಂಸ್ಥೆ ಹಮ್ಮಿಕೊಂಡಿದೆ. ದಿನದ ಆರಂಭಕ್ಕೆ ನರಸಿಂಹರಾಜುರವರ ವ್ಯಂಗ್ಯಚಿತ್ರ (ಕ್ಯಾರಿಕೇಚರ್) ಸ್ವರ್ಧೆಯಿದ್ದು, ರಾಜ್ಯದ ಪ್ರಮುಖ ವ್ಯಂಗ್ಯಚಿತ್ರಕಾರರು ಪಾಲ್ಗೊಳ್ಳಲಿದ್ದಾರೆ.

ಸಂಜೆ ೪ ಗಂಟೆಗೆ ಹಾಸ್ಯಚಕ್ರವರ್ತಿಯ ಸವಿನೆನಪು ಈ ಕಾರ್ಯಕ್ರಮದಲ್ಲಿ ದಿ. ನರಸಿಂಹರಾಜುರವರನ್ನು ಸ್ಮರಿಸುತ್ತ ಅವರ ಆತ್ಮೀಯ ಒಡನಾಡಿಗಳಾಗಿದ್ದ ನಟ, ನಿರ್ಮಾಪಕ ಶ್ರೀ ದ್ವಾರಕೀಶ್, ಹಿರಿಯ ನಿರ್ದೇಶಕ ಶ್ರೀ ಭಗವಾನ್, ಸಾಹಿತಿ ಡಾ. ಕೆ. ಪುಟ್ಟಸ್ವಾಮಿ, ಶ್ರೀಮತಿ ಶಾರದಮ್ಮ ನರಸಿಂಹರಾಜು ಮತ್ತು ಕುಟುಂಬದ ಇತರರು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಪ್ರಖ್ಯಾತ ಸಂಗೀತ ಸಂಯೋಜಕ, ಚಿತ್ರಸಾಹಿತಿಗಳಾದ ಶ್ರೀ ಹಂಸಲೇಖರವರ  ಅಧ್ಯಕ್ಷತೆಯಲ್ಲಿ ಹಾಸ್ಯಚಕ್ರವರ್ತಿಯ ಸವಿನೆನಪು ನಡೆಯಲಿದೆ.

ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್, ಗೃಹ ಮಂತ್ರಿಗಳಾದ ಶ್ರೀ ಆರ್. ಅಶೋಕ, ಬೆಂಗಳೂರು ಮಹಾನಗರ ಮಹಾಪೌರರಾದ ಶ್ರೀ ವೆಂಕಟೇಶ್ ಮೂರ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಶ್ರೀ ಕೆ.ವಿ. ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಚಿತ್ರರಂಗದ ತಾರೆಯರು, ತಂತ್ರಜ್ಞರು, ವಿತರಕರು ಹಾಗೂ ವಿಶೇಷ ವ್ಯಕಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಬಂಧ ರಚಿಸಿದ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದೊಂದಿಗೆ ತಿತಿತಿ.hಚಿಚಿsಥಿಚಿಛಿhಚಿಞಡಿಚಿvಚಿಡಿಣhi.ಛಿom <hಣಣಠಿ://ತಿತಿತಿ.hಚಿಚಿsಥಿಚಿಛಿhಚಿಞಡಿಚಿvಚಿಡಿಣhi.ಛಿom>  ವೆಬ್‌ಸೈಟ್‌ನ ಉದ್ಘಾಟನೆಯಾಗಲಿದೆ. ಇದರೊಂದಿಗೆ ಹಾಸ್ಯ ಚಕ್ರವರ್ತಿ ನರಸಿಂಹರಾಜುರವರು ಅಭಿನಯಿಸಿದ ಚಿತ್ರಗಳಿಂದ ಆಯ್ದ ಹಾಸ್ಯ ಸನ್ನಿವೇಶಗಳ ವಿಡಿಯೋ ಸಂಕಲನದ ಡಿವಿಡಿಯನ್ನು ಶ್ರೀ ಗಣೇಶ್ ವಿಡಿಯೋಸ್ ಸಂಸ್ಥೆ ಜನ್ಮದಿನದ ಉಡುಗೊರೆಯಾಗಿ ಅದೇ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ಎವರೆಡಿ ಬಾಯ್ಜ್

ಹಾಸ್ಯ ಚಕ್ರವರ್ತಿ ದಿವಂಗತ ನರಸಿಂಹರಾಜುರವರ ಮೊಮ್ಮಕ್ಕಳಾದ ಎಸ್ ಡಿ ಅರವಿಂದ್ ಮತ್ತೆ ಅವಿನಾಶ್ ಈ ಹಿಂದೆ ಜುಗಾರಿ ಸಿನೆಮಾದ ಮೂಲಕ ಚಿತ್ರ ರಂಗಕ್ಕೆ ಪರಿಚಿತರಾಗಿದ್ದು ಈಗ ತಮ್ಮದೇ ನಿರ್ಮಾಣ ಸಂಸ್ಥೆಯಾದ
ಗೋಲ್ಸ್ & ಡ್ರೀಮ್ಜ್ ಮೂಲಕ ಎವರೆಡಿ ಬಾಯ್ಜ್ ಎಂಬ ಹೊಸ ಸಿನೆಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತವು ನರಸಿಂಹರಾಜುರವರ ೮೯ನೇ ಜನ್ಮದಿನೋತ್ಸವವಾದ ಜುಲೈ ೨೪, ೨೦೧೨ರಂದು ಬೆಂಗಳೂರು ನಗರದ ಟೌನ್ ಹಾಲ್‌ನಲ್ಲಿ ನಡೆಯಲಿದೆ.

ಹುಟ್ಟಿದ ಪ್ರತಿಯೊಬ್ಬರೂ ತಾವು ಕೆಲವು ಕ್ಷಣಗಳಾದರೂ ಜಗದ ಕಣ್ಣಿಗೆ ಬಿದ್ದು ಪ್ರಖ್ಯಾತರಾಗಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಪ್ರಯತ್ನವನ್ನೂ ಮಾಡುತ್ತಾರೆ. ಯಶಸ್ಸು ಕೆಲವರನ್ನು ಹುಡುಕಿಕೊಂಡು ಬರುತ್ತದೆ. ಕೆಲವರು ಯಶಸ್ಸನ್ನು ಹುಡುಕಿಕೊಂಡು ಹೋಗುತ್ತಾರೆ. ಯಶಸ್ಸಿನ ಈ ಹುಡುಕಾಟದಲ್ಲಿ ಮೋಸ ಹೋಗುವುದೂ ಕೂಡಾ ಕೆಲವೊಮ್ಮೆ ಆಗುತ್ತದೆ. ಇಂತಹ ಮೋಸದ ಜಾಲಕ್ಕೆ ಸಿಲುಕಿ ಫಜೀತಿಯನ್ನು ಅನುಭವಿಸುತ್ತಾ ನೋಡುಗರನ್ನು ನಗಿಸುತ್ತಾ ಸಾಗುವ,  ಈ ನಾಲ್ಕು ಹುಡುಗರ ಎರಡು ದಿನಗಳ ಅನುಭವದ ಮೂಲಕ ಆಧುನಿಕ ಮಹಾನಗರದ ಹುಸಿ ಕಂಬಗಳಾಗಿರುವ ಮಾಧ್ಯಮ, ರಿಯಲ್ ಎಸ್ಟೇಟ್, ರಾಜಕೀಯ, ಮುಂತಾದ ಹಲವು ವಿಷಯಗಳ ವಿಡಂಬನಾತ್ಮಕ ಪ್ರಸ್ತುತಿಯೇ ಇನ್ನೂ ಹೆಸರಿಡದ ಈ ಚಿತ್ರದ ವಸ್ತುವಾಗಿದೆ.
 
 ವಯಸ್ಸು ಕಳೆದು ಹೋದ ಮೇಲೆ ದೊರಕದು ಸ್ಟೈಲಿಗಿರುವ ಪ್ರೇಮ ಲೋಕ ನಮ್ಮದು ಬ್ಯಾಂಗ್.... ಬ್ಯಾಂಗ್...... ಎಂದು ಹೊಸ ಅಲೆ ಎಬ್ಬಿಸಿದ ಹಂಸಲೇಖ ಅದೇ ವಯಸ್ಸು, ಅದೇ ಸ್ಟೈಲು, ಮತ್ತೆ ಅದೇ ಬ್ಯಾಂಗ್‌ನಲ್ಲಿ ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಚಿತ್ರದಲ್ಲಿ ನಾಲ್ಕು ಪ್ರಮುಖ ಯುವಕರ ಪಾತ್ರವಿದ್ದು ಜುಗಾರಿಯಲ್ಲಿ ಹೊಸ ಭರವಸೆಯನ್ನು ಹುಟ್ಟಿಸಿದ ಎಸ್ ಡಿ ಅವಿನಾಶ್, ಕಬಡ್ಡಿ ಚಿತ್ರ ಖ್ಯಾತಿಯ ನಾಯಕ ಪ್ರವೀಣ್, ರೇಡಿಯೋ ಸಿಟಿ ಎಫ಼್‌ಎಂನಲ್ಲಿ  ಭೂತ ಬಿಡಿಸುವ  ರೇಡಿಯೊ ಜಾಕಿ ಪ್ರದೀಪ ಹಾಗು ಇತ್ತೀಚೆಗಷ್ಟೆ ಸುವರ್ಣ ವಾಹಿನಿಯಲ್ಲಿ ಮೂಡಿ ಬಂದ ನೋಡಿ ಸ್ವಾಮಿ ನಾವಿರೋದು ಹೀಗೆ ಕಾರ್ಯಕ್ರಮದ ವಿಜೇತ ದುಬಾಯ್ ದೀಪಕ್ ಶೆಟ್ಟಿ ಆ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಇದುವರೆಗೂ ಹಾಸ್ಯ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿರುವ ಬೊಕ್ಕ ತಲೆಯ ಮಾಂತ್ರಿಕ ಸಿಹಿ ಕಹಿ ಚಂದ್ರು ಈ ಚಿತ್ರದಲ್ಲಿ ಗಂಭೀರವಾದ, ಅಷ್ಟೇ ಮುಖ್ಯವಾದ ಪಾತ್ರದಲ್ಲಿ, ವಿಶೇಷವೆನಿಸುವ ಗೆಟ್‌ಅಪ್‌ನಲ್ಲಿ ಕಾಣಿಕೊಳ್ಳಲಿದ್ದಾರೆ.

ಕುರಿ ಕೋಳೀನಾ ಸೋಮವಾರ ಶನಿವಾರ ಕುಯ್ಯಂಗಿಲ್ಲ ಎಂದು ಹಳೇ ನಂಬಿಕೆಯನ್ನು ಹೊಸದಾಗಿ ಹೇಳಿದ
ಡಾ. ವಿಠ್ಠಲ್ ರಾವ್ ಪ್ರಖ್ಯಾತಿಯ ರವಿಶಂಕರ್ ಈ ಸಿನಿಮಾದಲ್ಲಿ ದೇಶದ ಪ್ರಮುಖ ಪ್ರಹರೆಯ ವರ್ಗವೊಂದನ್ನು ವಿಭಿನ್ನವಾಗಿ ಪ್ರತಿನಿಧಿಸಲಿದ್ದಾರೆ.

ಆ ದಿನಗಳು ಸಿರಾಜ್ ಭಾಯ್ ಖ್ಯಾತಿಯ ಆಸಿಫ಼್ ಕ್ಷತ್ರಿಯ ಇಲ್ಲಿ ಮೈಂಡ್ ಗೇಮ್ ಆಡುತ್ತ ಮೈಂಡ್‌ಲೆಸ್ ಆಗಿ ಸಿಲುಕಿಕೊಳ್ಳುತ್ತಾರೆ.

ಗೋಲ್ಸ್ ಆಂಡ್ ಡ್ರೀಮ್ಜ್ ಸಂಸ್ಥೆ ಅರ್‌ಎನ್‌ಎ ಗ್ರಾಫ಼ಿಕ್ಸ್ ಮತ್ತು ಆಕ್ಟಪಸ್ ಮೀಡಿಯಾ ಸ್ಕೂಲ್ ಸಹಯೋಗದೊಂದಿಗೆ ಈ ಚಿತ್ರಕ್ಕಾಗಿ ೫೦:೫೦ ಪಾರ್ಟ್ನರ್‌ಶಿಪ್‌ನಲ್ಲಿ ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದೆ. ಶೇ. ೫೦ರಷ್ಟು ಸಂಸ್ಥೆ ವಿನಿಯೋಗಿಸಿದರೆ ಇನ್ನುಳಿದ ಶೇ. ೫೦ ಸಹಕಾರ ಮಾದರಿಯಲ್ಲಿ ಹಣವನ್ನು ಹೊಂದಿಸಿದೆ. ಶಿಕ್ಷಣ, ಇಂಜಿನಿಯರ್, ಡಾಕ್ಟರ್, ವ್ಯಾಪಾರಿ, ಆರ್ಕಿಟೆಕ್ಟ್, ಕಂಟ್ರಾಕ್ಟರ್, ಡೆವಲೆಪರ್ಸ್ ಇತ್ಯಾದಿ ಸಿನಿಮೇತರ ವರ್ಗದ ತಜ್ಞರು, ಆತ್ಮೀಯ ಗೆಳೆಯರು ಹೊಸ ಬಗೆಯ ಸಿನಿಮಾಗೆ ಹಣ ಹೂಡುತ್ತಿರುವುದು ವಿಶೇಷ.

ಶ್ರೀಧರ್ ರಾಜೇ ಅರಸ್, ಜಿ.ಎನ್.ಸಿ ರೆಡ್ಡಿ, ಶ್ರೀಮತಿ ಸಂಧ್ಯಾ, ಮಹೇಶ್ ಚಿತ್ರದ ಸಹ ನಿರ್ಮಾಪಕರು.

ಕಥೆ -ಅನ್ಷು ಚಿಬರ್ ಮತ್ತು ಎಸ್.ಡಿ. ಅರವಿಂದ್
ಚಿತ್ರಕತೆ, ಸಂಭಾಷಣೆ - ಮಲ್ಲಿಕಾರ್ಜುನ್ ಎಂ, ರವಿಕುಮಾರ್ ಜೆ ವಿ ಮತ್ತು ಎಸ್ ಡಿ ಅರವಿಂದ್.

ನಿರ್ದೇಶನ - ಎಸ್ ಡಿ ಅರವಿಂದ
ಸಂಗೀತ - ಹಂಸಲೇಖ
ಸಾಹಿತ್ಯ - ಹಂಸಲೇಖ, ಡಾ. ಕೆ ವೈ ನಾರಾಯಣಸ್ವಾಮಿ
ಛಾಯಾಗ್ರಹಣ - ಅನಂತ್ ಅರಸ್
ಸಂಕಲನ - ಶ್ರೀ ಕ್ರೇಜ಼ಿ ಮೈಂಡ್ಜ್

ಮುಖ್ಯ ಸಹ ನಿರ್ದೇಶಕರು - ರವಿಕುಮಾರ್ ಜೆ ವಿ ಮತ್ತು ಮಲ್ಲಿಕಾರ್ಜುನ್ ಎಂ,
ನಿರ್ದೇಶನ ಸಹಾಯ - ಮಹದೇವ ಸ್ವಾಮಿ


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed